೧) ರೀ ಮನಷ್ಯಾಗ ಬ್ಯಾಡ್ ಟೈಂ ಶುರು ಆದ್ರೆ ತಲೆ ಕೆರ್ಕೊಂಡು ಕ್ಯಾನ್ಸರ ಆಗಿ, ಡಾಕ್ಟರ ತಲೇನೇ ತಗಿಬೇಕು ಅಂತಾರೆ...ಅಂಥಾದ್ರಲ್ಲಿ ನಾನು ಈ ದಿಲ್ - ಹಾರ್ಟ - ಹೃದಯ ಅಂತಾರಲ್ಲಾ ಅಲ್ಲಿಗೆ ಕೈ ಹಾಕಿ ಪರಾ ಪರಾ ಅಂತ ಕೆರ್ಕೊಂಡು ಬಿಟ್ಟಿದಿನಿ ಕಣ್ರೀ.....
೨) ನಿಮ್ ನಗೂ,ನಿಮ್ ಬ್ಯೂಟಿ,ನಿಮ್ ವೈಸ್,ನಿಮ್ ಕೂದ್ಲು,ನಿಮ್ ನೋಟ,ಈ ಬಿಕನ್ಯಾಸಿ ಮಳೆ,ನಿಮ್ ಗೆಜ್ಜೆ ಸದ್ದು,ಆ ವಾಚು,ಆರಾಸ್ಕಲ್ ದೇವದಾಸ್ ಗಂಟೆ ಸದ್ದು ಎಲ್ಲಾ ಮಿಕ್ಸ ಆಗಿ ನನ್ನ ಲೈಫಲ್ಲೆ ರೀಪೇರಿ ಮಾಡಾಕ್ಕಾಗ್ದೆಯಿರೊ ಅಷ್ಟು ಗಾಯಾ ಮಾಡಿದೆ ಕಣ್ರೀ...
೩) ನನ್ಗೆ ಗೊತ್ತಾಗೋಯ್ತು ಕಣ್ರೀನೀವು ನನ್ಗೆ ಸಿಗೋಲ್ಲಂತ...ಬಿಟ್ಕೋಟ್ಬಿಟ್ಟೆ ಕಣ್ರೀ...ನಿಮ್ಮನ್ನ ಪಟಾಯಿಸಿ ಲೋಫರ
ಅನಿಸ್ಕೋಳೋದಕ್ಕಿಂತ ಒಬ್ಬ ಡಿಸೆಂಟ್ ಹುಡ್ಗನಾಗಿ ಇದ್ಬಿಟ್ರೇ ಸಾಕು ಅನ್ನಿಸ್ ಬಿಟ್ಟಿದೆ ಕಣ್ರೀ....ಆದ್ರೆ ಒಂದು ವಿಷ್ಯಾ ತಿಳ್ಕೋಳಿ ನನ್ನಷ್ಟು ನಿಮ್ಮನ್ನ ಇಷ್ಟ ಪಡೊವ್ರು ಈ ಭೂಮಿಮ್ಯಾಲೆ ಯಾರು ಸಿಗಲ್ಲಾ ಕಣ್ರೀ...
೪) ಏನೋ ದೇವದಾಸು,ಲೈಫಲ್ಲಿ ಮೊದಲ್ನೆ ಸಾರಿ ಇಷ್ಟ ಪಟ್ಟ ಒಂದು ಮೊಂಬತ್ತಿ ಹಚ್ಚಿದ್ದೆ, ಮಳೆ ಹೊಯ್ದು ಆರಿಹೊತಲ್ಲೋ...
೫) ಲೈಫಲ್ಲಿ ಈ ಲೆವಲ್ಗೆ ಕಂಫ್ಯೂಜ್ ಆಗಿದ್ದು ಇದೇ ಮೊದ್ಲು...ಇಲ್ಲಾ ನಿಮ್ಮಾಶೀರ್ವಾದ...
೬) ನೀವು ಎಫ್ ಎಮ್ ನವ್ರು ಯಾರ್ ಫೋನ್ ಮಾಡಿದ್ರು ಪ್ರಾಬ್ಲೆಮ್ ಆಗುತ್ತೆ ಅಂತಾ ರೈಲ್ ಹತ್ತಿಸ್ತಾನೆ ಇರ್ತಿರಾ ಬಿಡ್ರಿ....
೭) ಈ ಮುಂಗಾರು ಮಳೆಲಿ ಇಷ್ಟೋಂದು ಬೆಂಕಿ ಇದೆ ಅಂತಾ ಗೋತ್ತಿರಲಿಲ್ಲಾ ದೇವದಾಸು....
೮) ದೇವದಾಸ್, ಯಾಕೋ ನನ್ನ ಜೋತೆ ಬರೋಕೆ ಹೋದೆ,ಏನಿದ್ಯೋ ನನ್ನ ಲೈಫಲ್ಲಿ???
೯) ಈ ಪ್ರೀತಿ ಮಳೆಗೆ ಸಿಕ್ಕು ನಾನು ದಿಕ್ಕಾಪಾಲಾಗಿ ಹೋದೆ ಕಣೋ, ದಿಕ್ಕೆ ಇಲ್ಲಾ ಕಣೋ ನನ್ಗೆ?
೧೦) ಇಷ್ಟೆಲ್ಲಾ ನೋವು ಎದೆಯಲ್ಲಿ ಇಟ್ಕೋಂಡು ನಾನ್ ಉಳಿತಿನೆನೋ ದೇವದಾಸಾ??
೧೧) ನೀವು ಸಿಗ್ದೆ(ಸಿಗದೆ) ಇದ್ರೆ ನೋವೆ ಆಗುತ್ರಿ, ಆದ್ರೆ ಈ ನೋವಲ್ಲಿ ವಂಥರಾ ಸುಖಾ ಇದೆ...ಸ್ವೀಟ್ ಪೇನ್...ಸ್ವೀಟ್ ಮೆಮೋರೀಜ್ ಜೋತೆಗೆ ಈ ಹಾಟ್ ಡ್ರೀಂಕ್ ಲೋಕಲ್.....ಈ ನೀರಾ ಇದ್ರೆ ದೂಸ್ರಾ ಮಾತೇ ಇಲ್ಲಾರೀ...
೧೨) ಅರ್ಥಾ ಆಗಿಲ್ಲಾ ಆಗೋದು ಬೇಡಾ ಬಿಡಿ...
೧೩) ಥ್ಯಾಂಕ್ಸ ಕಣ್ರೀ ನಂದಿನಿ,ಪ್ರೀತಿ ವಿಷ್ಯಾದಲ್ಲಿ ನನ್ ಕಣ್ ತೆರೆಸಿದ ದೇವತೆ ಕಣ್ರಿ ನೀವು...ಈ ಕಣ್ಣು ಕ್ಲೋಜಾಗಿ ಮಣ್ಣು ಸೇರಿದ ಮೇಲು, ನಾನ್ ಈ ಉಪಕಾರಾನ ಮರೆಯಲ್ಲಾರೀ....ನೀವು ಸಿಗಲ್ಲಾ ಅಂತ ನಂಗೆನು ಬೇಜಾರಿಲ್ಲಾರೀ...ನಿಮ್ ಜೋತೆ ಕಳೆದ್ನೆಲ್ಲಾ ಈ ನಾಲ್ಕು ದಿವ್ಸಾ, ಅಷ್ಟು ಸಾಕು ಕಣ್ರೀ....ಅದನ್ನೆ ರೀವೈಂಡ ಮಾಡ್ಕೋಂಡು ಹೇಗೋ ಜೀವನ ತಳ್ಳಿ ಬಿಡ್ತಿನಿ...
ವಿ.ಸೂ.: ಓದಿದವರು ದಯಮಾಡಿ ತಮ್ಮ ಅನಿಸಿಕೆಗಳನ್ನು ತಿಳಿಸಬೇಕು.......
Thursday, February 22, 2007
Subscribe to:
Post Comments (Atom)
3 comments:
nimge abinandanegalu
hay man thanks 4 tat dialpogs yaar.....really these are prety awesome ....thansks once again!
dude...niwanthu ganesh of gadag ree..brahmachari ganesh
Post a Comment