ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆಯೋ...
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ...
ನಿನ್ನ ಮುಗಿಲ ಸಾಲೇ,ಧರೆಯ ಕೊರಳ ಪ್ರೇಮದ ಮಾಲೆ
ಸುರಿವ ಒಲುಮೆ ಆಜಡಿ ಮಳೆಯೆ,ಪ್ರೀತಿ ಮೂಡಿದೆ
ಯಾವ ಚಿಪ್ಪಿನಲ್ಲಿ, ಯಾವ ಹನಿಯು ಮುತ್ತಾಗುವುದೊ
ಒಲವು ಎಲ್ಲಿ ಕುಡಿಯೊಡೆಯುವುದೊ,ತಿಳಿಯದಾಗಿದೆ
ಮುಂಗಾರು ಮಳೆಯೇಏನು ನಿನ್ನ ಹನಿಗಳ ಲೀಲೆ...
ಸ್ಯಾಕ್ಸೋಫೋನ್.........
ಭುವಿ ಕೆನ್ನೆ ತುಂಬಾ,ಮುಗಿಲ ಸುರಿದ ಮುತ್ತಿನ ಗುರುತು
ನನ್ನ ಎದೆಯ ತುಂಬಾ, ಅವಳು ಬಂದ ಹೆಜ್ಜೆಯ ಗುರುತು
ಹೆಜ್ಜೆ ಗೆಜ್ಜೆ ಆ ಸವಿ ಸದ್ದು, ಪ್ರೇಮನಾದವೋ....
ಎದೆ ಮುಗಿಲಿನಲ್ಲಿ, ರಂಗು ಚೆಲ್ಲಿ ನಿಂತಳು ಅವಳು
ಬರೆದು ಹೆಸರ ಕಾಮನ ಬಿಲ್ಲು,ಏನು ಮೊಡಿಯೋ......
ಮುಂಗಾರು ಮಳೆಯೇಏನು ನಿನ್ನ ಹನಿಗಳ ಲೀಲೆ.....
ಯಾವ ಹನಿಗಳಿಂದ, ಯಾವ ನೆಲವು ಹಸಿರಾಗುವುದೋ
ಯಾರ ಸ್ಪರ್ಶದಿಂದ, ಯಾರ ಮನವು ಹಸಿಯಾಗುವುದೋ
ಯಾರ ಉಸಿರಲಿಯಾರ ಹೆಸರೋ ಯಾರು ಬರೆದರೋ
ಯಾವ ಪ್ರೀತಿ ಹೂವು,ಯಾರ ಹೃದಯದಲ್ಲಿ ಅರಳುವುದೋ
ಯಾರ ಪ್ರೇಮ ಪೂಜೆಗೆ ಮುಡಿಪೋ,ಯಾರು ಬಲ್ಲರೋ....
ಮುಂಗಾರು ಮಳೆಯೇಏನು ನಿನ್ನ ಹನಿಗಳ ಲೀಲೆ...
ಒಲವ ಚಂದಮಾಮಾ, ನಗುತ ಬಂದ ಮನದಂಗಳಕೆ
ಪ್ರೀತಿ ಬೆಳಕಿನಲ್ಲಿ, ಹೃದಯ ಹೊರಟಿದೆ ಮೆರವಣಿಗೆ
ಅವಳ ಪ್ರೇಮದೂರಿನ ಕಡೆಗೆ,ಪ್ರೀತಿ ಪಯಣವೋ
ಪ್ರಣಯ ದೂರಿನಲ್ಲಿ, ಕಳೆದು ಹೊಗೊ ಸುಖವ ಇಂದು
ಧನ್ಯನಾದೆ ಪಡೆದುಕೊಂಡು ಹೊಸ ಜನುಮವೋ.......
ಮುಂಗಾರು ಮಳೆಯೇಏನು ನಿನ್ನ ಹನಿಗಳ ಲೀಲೆ...
*************************************************************************************
ಕುಣಿದು ಕುಣಿದು ಬಾರೆ ಒಲಿದು ಒಲಿದು ಬಾರೆ....
ಕುಣಿದು ಕುಣಿದು ಬಾರೆ ಒಲಿದು ಒಲಿದು ಬಾರೆ
ಕುಣಿವ ನಿನ್ನ ಮೇಲೆ ಮಳೆಯ ಹನಿಯ ಮಾಲೆ
ಜೀವಕೆ ಜೀವ ತಂದವಳೆ ಜೀವಕ್ಕಿಂತ ಸನಿಹ ಬಾರೆ ಒಲವೆ ವಿಸ್ಮಯ....
ಒಲವೆ ವಿಸ್ಮಯನಿನ್ನ ಪ್ರೇಮ ರೂಪಾ ಕಂಡು ನಾನು ತನ್ಮಯ
ಹುಚ್ಚು ಹುಡುಗ ನೀನು ಬಿಚ್ಚಿ ಹೇಳಲೇನು
ಜೀವಕೆ ರೆಕ್ಕೆ ತಂದವನೆ ಬಾನಿಗೇರಿ ಹಾರುವ ಬಾರೋ
ಒಲವೆ ವಿಸ್ಮಯ.....ಆ...ಆ...ಆ....
ಇರುಳಲಿ ನೀನಲ್ಲೊ ಮೈಮುರಿದರೆ, ನನಗೆಲ್ಲಿ ನವಿರಾದ ಹೂಕಂಪನಾ
ನನ್ನಲ್ಲಿ ನೀ ಕಣ್ಣಿಟ್ಟು ಬರ ಸೆಳೆದರೆ, ಮಾತಿಲ್ಲ ಕತೆಯಿಲ್ಲ ಬರೆ ರೋಮಾಂಚನ..
ನಿನ್ನ ಕಣ್ಣ ತುಂಬಾ ಇರಲಿ ನನ್ನ ಬಿಂಬ,ಹೂವಿಗೆ ಬಣ್ಣ ತಂದವನೆ
ಪರಿಮಳದಲ್ಲಿ ಅರಳುವ ಬಾರೋ.... ಒಲವೆ ವಿಸ್ಮಯ
ಒಲವೆ ನೀನೊಲಿದ ಕ್ಷಣದಿಂದಲೆ
ಈ ಭೂಮಿ ಈ ಬಾನು ಹೊಸದಾಗಿದೆ
ಖುಷಿಯಿಂದ ಈ ಮನವೆಲ್ಲಾ ಹೂವಾಗಿದೆ
ಬೇರೆನು ಬೇಕಿಲ್ಲ ನೀನಲ್ಲದೆ.....
ಕುಣಿದು ಕುಣಿದು ಬಾರೆ ಒಲಿದು ಒಲಿದು ಬಾರೆ
ಜೀವಕೆ ಜೀವ ತಂದವಳೆ ಜೀವಕ್ಕಿಂತ ಸನಿಹ ಬಾರೆ ಒಲವೆ ವಿಸ್ಮಯ...ಒಲವೆ ವಿಸ್ಮಯ
ನಿನ್ನ ಪ್ರೇಮ ರೂಪಾ ಕಂಡು ನಾನು ತನ್ಮಯ
ಹುಚ್ಚು ಹುಡುಗ ನೀನು ಬಿಚ್ಚಿ ಹೇಳಲೇನು
ಜೀವಕೆ ಹೆಕ್ಕೆ ತಂದವನೆ ಬಾನಿಗೇರಿ ಹಾರುವ ಬಾರೋ ಒಲವೆ ವಿಸ್ಮಯ.....
*************************************************************************************
ಅನಿಸುತಿದೆ ಯಾಕೋ ಇಂದು ನೀನೇನೇ ನನ್ನವಳಿಂದು......
ಅನಿಸುತಿದೆ ಯಾಕೋ ಇಂದು ನೀನೇನೇ ನನ್ನವಳಿಂದು
ಮಾಯದ ಲೋಕದಿಂದ ನನಗಾಗಿ ಬಂದವಳಿಂದು..ಆಹಾ...ಎಂಥ ಮಧುರ ಯಾತನೇ
ಕೊಲ್ಲು ಹುಡುಗಿಯೊಮ್ಮೆ ನನ್ನ, ಹಾಗೆ ಸುಮ್ಮನೆ....
ಸುರಿಯುವ ಸೋನೆಯು ಸೂಸಿದೆ ನಿನ್ನಯ ಪರಿಮಳ
ಇದು ಯಾರ ಕನಸಲು ನೀನು ಹೋದರೆ ತಳಮಳ
ಪೂರ್ಣ ಚಂದಿರಾ ರಜಾ ಹಾಕಿದ ನಿನ್ನಯ ಮೊಗವನು ಕಂಡ ಕ್ಷಣ
ನಾ ಕೈದಿ ನೀನೆ ಸೆರೆಮನೆ,ತಪ್ಪಿ ನನ್ನ ಅಪ್ಪಿಕೋ ಒಮ್ಮೆ ,ಹಾಗೆ ಸುಮ್ಮನೇ...
ತುಟಿಗಳ ಹೂವಲಿ ಆಡದ ಮಾತಿನ ಸಿಹಿ ಇದೆ
ಮನಸಿನ ಪುಟದಲಿ ಕೇವಲ ನಿನ್ನಯ ಸಹಿ ಇದೆ
ಹಣೆಯಲಿ ಬರೆಯದ ನಿನ್ನ ಹೆಸರ ಹೃದಯದಿ ನಾನೇ ಕೊರೆದಿರುವೆ
ನಿನಗುಂಟೆ ಇದರ ಕಲ್ಪನೆ ನನ್ನ ಹೆಸರ ಕೂಗೆ ಒಮ್ಮೆ , ಹಾಗೆ ಸುಮ್ಮನೇ...
ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳಿಂದು
ಮಾಯದ ಲೋಕದಿಂದ ನನಗಾಗಿ ಬಂದವಳಿಂದು..ಆಹಾ...ಎಂಥ ಮಧುರ ಯಾತನೇ
ಕೊಲ್ಲು ಹುಡುಗಿಯೊಮ್ಮೆ ನನ್ನ ,ಹಾಗೆ ಸುಮ್ಮನೆ ...".
*************************************************************************************
ಒಂದೆ ಒಂದು ಸಾರಿ ಕಣ್ಮುಂದೆ ಬಾರೆ.....
ಒಂದೆ ಒಂದು ಸಾರಿ ಕಣ್ಮುಂದೆ ಬಾರೆ
ಕಣ್ಣ ತುಂಬಾ ನಿನ್ನನ್ನು ನಾ ತುಂಬಿ ಕೊಂಡಿಹೆನು
ನಿನ್ನಿಂದ ನನ್ನನ್ನು ನಾ ಕಂಡು ಕೊಂಬೆನು
ನೀ ಯಾರೋ ಕಾಣೇನು ನನ್ನೊಳ ನೀನು...ಅ..ಆ..ಆ...ಆ..
ಒಂದೇ ಕ್ಷಣ ಎದುರಿದ್ದು....ಆ..ಅ....ಒಂದೇ ಕ್ಷಣ ಎದುರಿದ್ದು
ನನ್ನ ಈ ಬಾಳನು ನೀ ಸಿಂಗರಿಸಿದೆ ನನ್ನ ಮೈಮನಸಲು ನೀ ಆವರಿಸಿದೆ.
ಒಂದೆ ಒಂದು ಸಾರಿ ಕಣ್ಮುಂದೆ ಬಾರೆ
ಕಣ್ಣ ತುಂಬಾ ನಿನ್ನಲ್ಲಿ ನಾ ತುಂಬಿ ಕೊಂಡಿಹೆನು
ನಿನ್ನಿಂದ ನನ್ನನ್ನು ನಾ ಕಂಡು ಕೊಂಬೆನು
ನೀ ಯಾರೋ ಕಾಣೇನು ನನ್ನೊಳ ನೀನು...
ನಿನ್ನಾನಗೂ ನೋಡಿದಾಗ ಹಗಲಲ್ಲು ಸಹ ತಿಳಿ ಬೆಳದಿಂಗಳು...
ಸುರಿದಂಗಾಯಿತು ಸವಿದಂಗಾಯಿತು...
ಒಂದೆ ಒಂದು ಸಾರಿ ಕಣ್ಮುಂದೆ ಬಾರೆ
ಕಣ್ಣ ತುಂಬಾ ನಿನ್ನಲ್ಲಿ ನಾ ತುಂಬಿ ಕೊಂಡಿಹೆನು
ನಿನ್ನಿಂದ ನನ್ನನ್ನು ನಾ ಕಂಡು ಕೊಂಬೆನು ನೀ ಯಾರೋ ಕಾಣೇನು ನನ್ನೊಳ ನೀನು...
**************************************************************************************
ಅರಳುತಿರು ಜೀವದ ಗೆಳೆಯ ಸ್ನೇಹದ ಸಿಂಛನದಲ್ಲಿ.....
ಅರಳುತಿರು ಜೀವದ ಗೆಳೆಯ ಸ್ನೇಹದ ಸಿಂಛನದಲ್ಲಿ
ಬಾಡದಿರು ಸ್ನೇಹದ ಹೂವೆ ಪ್ರೇಮದ ಬಂಧನದಲ್ಲಿ
ಮನಸಲ್ಲಿ ಇರಲಿ ಭಾವನೆ ಮಿಡಿಯುತಿರಲಿ ಮೌನವೇನೇ ಹೀಗೆ ಸುಮ್ಮನೆ...ಅರಳುತಿರು ಜೀವದ ಗೆಳೆಯ
ಹಕ್ಕಿಯು ಹಾಡಿದೆ ತನ್ನ ಹೆಸರನು ಹೇಳದೆ
ಸಂಪಿಗೆ ಬಿರಿದೆ ತಂಪನು ಯಾರಿಗೂ ಕೇಳದೆ
ಬಿಸುವ ಗಾಳಿಯ ಹಕ್ಕಿಯ ಹಾಡಿನ ನಕ್ಕಿಗೆ ಹೆಸರಿನ ಹಂಗಿಲ್ಲ
ನನಗೇಕೆ ಅದರ ಯೋಚನೆ ಬೇಡ ಗೆಳೆಯ ನಂಟಿಗೆ ಹೆಸರು,ಯಾಕೆ ಸುಮ್ಮನೆ...
ಮಾತಿಗೆ ಮೀರಿದ ಭಾವದ ಸೆಳೆತವೆ ಸುಂದರ
ನಲುಮೆಯು ತುಂಬಿದ ಮನಸಿಗೆ ಬಾರದು ಬೇಸರ
ಬಾಳ ದಾರಿಯಲು ಬೇರೆ ಯಾದರು ಚಂದಿರ ಬರುವನು ನಮ್ಮ ಜೋತೆ
ನಾನು ನೀನು ಅವನಲಿ ನಿನ್ನನೆ ಇರಲಿ ಗೆಳೆಯ ಈ ಅನುಬಂಧ,ಹೀಗೆ ಸುಮ್ಮನೆ...
*************************************************************************************
ಇವನು ಗೆಳೆಯನಲ್ಲ ಗೆಳತಿ ನಾನು ಮೊದಲೆ ಅಲ್ಲ.....
ಇವನು ಗೆಳೆಯನಲ್ಲ ಗೆಳತಿ ನಾನು ಮೊದಲೆ ಅಲ್ಲ
ಇವನು ಇನಿಯನಲ್ಲ ತುಂಬ ಸನಿಯ ಬಂದಿಹನಲ್ಲ ನೋವಿನಲ್ಲು ನಗುತಿಹನಲ್ಲ
ಯಾಕೆ ಇಥರಾ ಜಾಣ ಮನವೆ ಕೇಳು ಜಾರಬೇಡ ಇವನ ಕಡೆಗೆ
ಯಾಕೆ ನಿನಗೆ ಸಲ್ಲದ ಸಲಿಗೆ ಇರಲಿ ಅಂತರ....
ಒಲವ ಹಾದಿಯಲ್ಲಿ ಇವನು ನನಗೆ ಹೂವು ಮುಳ್ಳು
ಮನದ ಕಡಲಿನಲ್ಲಿ ಇವನು ಅಲೆಯ ಭೀಕರ ಸುಳಿಯೋ
ಅರಿಯದಂಥ ಹೊಸ ಕಂಪನವೋ ಯಾಕೋ ಕಾಣೆನು
ಅರಿತು ಮರೆತ ಜೀವ ವಾಲದಂತೆ ಇವನ ಕಡೆಗೆ
ಸೋಲದಂತೆ ಕಾಯೇ ಮನವೆ ಉಳಿಸು ನನ್ನನು...ಇವನು ಇನಿಯನಲ್ಲ ತುಂಬ ಸನಿಯ ಬಂದಿಹನಲ್ಲ
ತಿಳಿದು ತಿಳಿದು ಇವನು ತನ್ನ ತಾನೆ ಸೋತಿಹನಲ್ಲ
ಒಲುಮೆ ಎಂಬ ಸುಳಿಗೆ ಈಜು ಬರದೆ ಇಳಿದಿಹನಲ್ಲಾ
ಸಾವಿನಲ್ಲು ನಗುವುದ ಬಲ್ಲ ಏನು ಕಳವಳ
ಮುಳುಗುವವನ ಕೂಗು ಚಾಚುವಂತೆ ಮಾಡಿದೆ ಕೈಯಾ
ಜಾರಿ ಬಿಳುವುದೆ ಹೃದಯ ಏನೊ ತಳಮಳ...ಇವನು ಇನಿಯನಲ್ಲ ತುಂಬ ಸನಿಯ ಬಂದಿಹನಲ್ಲ
*************************************************************************************
Wednesday, February 07, 2007
Subscribe to:
Post Comments (Atom)
8 comments:
Hi Joshi,
really good work ..
thanks for giving the lyrics on web page...
One of the best film of in the history of Kannada cinema i always appiciated for his work he has done once again the best thing i hope every one will like it as i said earlier "Great Mind Works Great" thanku Mr,Prasad
great movie..it has taken the kannda film industry to a still greater levels..the photography in the movie is marvellous.. great work by our "MASTERMIND" joshi.. ;)
for the lyrics..keep goin joshi!
Namaskara joshiyavare, dhanyavadagalu.
olleya prayathna madiddira.
Hageya kannada uthama geethegalu mathu sahithyavannu antarjaladalli bittu, ella kannadarigu talupisino.
Jai karnataka mathe
ree joshi ravare nivvu thumbhane brilliant bidri intha olle film songs lyrics ellarigu sigo tharra maddi nivu thumbhane great aggi bittri...thanks kanri...inge olle kelasa mundhu varissi ..
wow..can you be a little generous..translate it to me...i really don't understand it..hehehehehehe joke...nevermind..anyway..keep it up it seems nice work as i read by the comments of your friends...
hi, prasu. excellent job u had done. thanks for giving the lyrics which i love most. i save it for a life-time. keep it up.
thanxx re yappa, nanna kelsa hagara madedreee.
enomee thanx.n karee na haduu bharee adavu.
Post a Comment